Galaxy Wearable ಖಾಸಗಿತನ ಸೂಚನೆ ಕೊನೆಯದಾಗಿ ನವೀಕರಿಸಿದ್ದು: 1 ಏಪ್ರಿಲ್‌ 2021 Samsung Electronics Co., Ltd. ನಲ್ಲಿ, ನಮ್ಮ ಗ್ರಾಹಕರಿಗೆ ಗೌಪ್ಯತೆ ಎಷ್ಟು ಮುಖ್ಯ ಎಂದು ನಮಗೆ ತಿಳಿದಿದೆ. ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹೇಗೆ ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳುವುದಾಗಿ ಖಚಿತಪಡಿಸಿಕೊಳ್ಳಲು ನಾವು ಈ ಖಾಸಗಿತನ ಸೂಚನೆಯನ್ನು ರಚಿಸಿದ್ದೇವೆ. https://account.samsung.com/membership/terms/privacypolicy ನಲ್ಲಿ ವೀಕ್ಷಿಸಬಹುದಾದ ನಮ್ಮ ಖಾಸಗಿತನ ನೀತಿಯು Galaxy Wearable ನ ನಿಮ್ಮ ಬಳಕೆಗೆ ಸಹ ಅನ್ವಯವಾಗುತ್ತದೆ. ನಿಮ್ಮ ಡೇಟಾವನ್ನು ನಾವು ಹೇಗೆ ಬಳಸುತ್ತೇವೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ನಮ್ಮ ಖಾಸಗಿತನ ನೀತಿಯು ಹೊಂದಿದೆ. ನಮ್ಮನ್ನು ಹೇಗೆ ಸಂಪರ್ಕಿಸಬೇಕು ಎಂಬ ಮಾಹಿತಿಯು ಕೂಡ ಇದರಲ್ಲಿದೆ. ಈ ಖಾಸಗಿತನ ಸೂಚನೆಗೆ ಹೆಚ್ಚುವರಿಯಾಗಿ ದಯವಿಟ್ಟು ನಮ್ಮ ಖಾಸಗಿತನ ನೀತಿಯನ್ನು ಓದಿ. ಆದಾಗ್ಯೂ, ಈ ಖಾಸಗಿತನ ಸೂಚನೆಯು ಎಲ್ಲಾ ಸಮಯದಲ್ಲೂ ಖಾಸಗಿತನ ನೀತಿಗಿಂತ ಮೇಲುಗೈ ಸಾಧಿಸುತ್ತದೆ. ನಾವು ಯಾವ ಮಾಹಿತಿ ಸಂಗ್ರಹಿಸುತ್ತೇವೆ? ನಿಮ್ಮ Galaxy Wearable ಮೂಲಕ, ನಾವು ನಿಮ್ಮ ಕುರಿತು ಮಾಹಿತಿಯನ್ನು ವಿವಿಧ ರೀತಿಗಳಲ್ಲಿ ಸಂಗ್ರಹಿಸುತ್ತೇವೆ ಮತ್ತು ನಿರ್ವಹಿಸುತ್ತೇವೆ. ನೀವು ನೇರವಾಗಿ ಒದಗಿಸುವ ಮಾಹಿತಿ • ನೀವು ನಿಮ್ಮ Galaxy Wearable ಸಾಧನದಲ್ಲಿ Samsung account ಗೆ ಲಾಗ್ ಇನ್ ಆದಾಗ, Samsung account ಮಾಹಿತಿ, ಉದಾಹರಣೆಗೆ ನಿಮ್ಮ Samsung account ID. ನಿಮ್ಮ Galaxy Wearable ನ ನಿಮ್ಮ ಬಳಕೆಯ ಬಗ್ಗೆ ಮಾಹಿತಿ • ನಿಮ್ಮ ಸಾಧನಗಳ ನಿಮ್ಮ ಬಳಕೆಯ ಬಗ್ಗೆ ಮಾಹಿತಿ, ಉದಾಹರಣೆಗಾಗಿ, ಸಾಧನದ ವಿಧ, ಸಾಧನದ ಮಾದರಿ, OS ವಿಧ ಮತ್ತು ಆವೃತ್ತಿ, ಸಾಧನದ ಗುರುತಿಸುವಿಕೆಗಳು ಮತ್ತು ಇತರ ಅನನ್ಯ ಗುರುತಿಸುವಿಕೆಗಳು, ಮೊಬೈಲ್ ನೆಟ್‌ವರ್ಕ್ ಪೂರೈಕೆದಾರರು, ಸಾಧನದ ಸಂರಚನೆ‌ಗಳು ಮತ್ತು ಸಂಯೋಜನೆಗಳು; • GPS, ಬ್ಲೂಟೂತ್ ಮತ್ತು WiFi ಸಂಕೇತಗಳ ಮೂಲಕ ನಿಮ್ಮ ಸ್ಥಳಕ್ಕೆ ಸಂಬಂಧಿಸಿದ ಮಾಹಿತಿ. ನಿಮ್ಮ Galaxy Wearable ನ ಕೆಲವು ವೈಶಿಷ್ಟ್ಯಗಳಿಗೆ ನಿಮ್ಮ ಸಾಧನದ ನಿಖರವಾದ ಭೌಗೋಳಿಕ ಸ್ಥಳವನ್ನು ಸಂಗ್ರಹಿಸುವ ಅಗತ್ಯವಿರುತ್ತದೆ, ಹಾಗೂ ಅಂತಹ ಸಂದರ್ಭಗಳಲ್ಲಿ, ನಾವು ನಿಮ್ಮ ಭೌಗೋಳಿಕ ಸ್ಥಳದ ಮಾಹಿತಿಯನ್ನು ಸಂಗ್ರಹಿಸುತ್ತೇವೆ, ಆದರೆ ನಿಮ್ಮ ಸಮ್ಮತಿಯೊಂದಿಗೆ ಮಾತ್ರ. ಯಾವುದೇ Galaxy Wearable ವೈಶಿಷ್ಟ್ಯವು ನಿಮ್ಮ ನಿಖರವಾದ ಭೌಗೋಳಿಕ ಸ್ಥಳವನ್ನು ಸಂಗ್ರಹಿಸುವ ಅಗತ್ಯವಿದ್ದಲ್ಲಿ, ನಿಮ್ಮ ಸಾಧನವು ನಿಮಗೆ ಸೂಚನೆ ನೀಡುತ್ತದೆ. ನೀವು Galaxy Wearable ಗೆ ನಿಮ್ಮ ನಿಖರವಾದ ಭೌಗೋಳಿಕ ಸ್ಥಳವನ್ನು ಸಂಗ್ರಹಿಸಲು ಅನುಮತಿಸದಿದ್ದಲ್ಲಿ, ನೀವು Galaxy Wearable ನ ಎಲ್ಲಾ ವೈಶಿಷ್ಟ್ಯಗಳನ್ನು ಬಳಸಲು ಆಗದಿರಬಹುದೆಂದು ದಯವಿಟ್ಟು ಗಮನಿಸಿ; • ನೀವು ಒಂದು ರಿಮೋಟ್ ಸಂಪರ್ಕ ವೈಶಿಷ್ಟ್ಯವನ್ನು (ಉದಾಹರಣೆಗಾಗಿ, ನಿಮ್ಮ Galaxy Wearable ನಿಮ್ಮ ಫೋನ್‌ನಿಂದ ಸಂದೇಶಗಳನ್ನು ಪಡೆಯುವುದಕ್ಕಾಗಿ ಬ್ಲೂಟೂತ್ ಬದಲಾಗಿ Wi-Fi ಅಥವಾ ಮೊಬೈಲ್ ಡೇಟಾದ ಮೂಲಕ ನಿಮ್ಮ ಮೊಬೈಲ್‌ ಸಾಧನವನ್ನು ನಿಮ್ಮ Galaxy Wearable ಸಾಧನದೊಂದಿಗೆ ಸಂಪರ್ಕಿಸಿದಾಗ) ಬಳಸಿದಾಗ; ನಿಮ್ಮ ಮೊಬೈಲ್‌ ಸಾಧನದಲ್ಲಿ ಅನುಸ್ಥಾಪಿಸಲಾಗಿರುವ ಆಪ್‌ಗಳ ಕುರಿತು ಮಾಹಿತಿ, ಉದಾಹರಣೆಗಾಗಿ, ಪ್ರಕಟಣೆಗಳು ಹಾಗೂ ಪಡೆದಿರುವ ಸಂದೇಶಗಳು ಮತ್ತು ಇಮೇಲ್‌ಗಳ ವಿಷಯ (ಸಂದೇಶಗಳು ಮತ್ತು ಮೀಡಿಯಾ ಫೈಲ್‌ಗಳ ವಿಷಯಗಳೂ ಒಳಗೊಂಡಂತೆ); ಹಾಗೂ • ನೀವು ʼಬ್ಯಾಕಪ್ ಮತ್ತು ಪುನಃಸ್ಥಾಪಿಸಿʼ ವೈಶಿಷ್ಟ್ಯವನ್ನು ಬಳಸಿದರೆ, ಸಾಫ್ಟ್‌ವೇರ್‌ ಆವೃತ್ತಿ, ಮಾರಾಟ ಸಂಕೇತ, ಅನುಸ್ಥಾಪಿಸಲಾಗಿರುವ ಮತ್ತು ಇತ್ತೀಚೆಗೆ ಬಳಸಲಾದ ಆಪ್‌ಗಳ ಪಟ್ಟಿ, ಅನುಸ್ಥಾಪಿಸಲಾಗಿರುವ ಆಪ್‌ಗಳ ಡೇಟಾ ಮತ್ತು ಸಂಯೋಜನೆಗಳು, ವಾಚ್ ಫೇಸ್, ಆಪ್‌ಗಳು ಮತ್ತು ವಿಜೆಟ್‌ಗಳೂ ಸೇರಿದಂತೆ ಹೋಮ್ ಸ್ಕ್ರೀನ್ ಸಂಯೋಜನೆಗಳು, ಪ್ರಕಟಣೆ ಸಂಯೋಜನೆಗಳು, ಡಿಸ್‌ಪ್ಲೇ, ಶಬ್ದಗಳು ಮತ್ತು ಕಂಪನಗಳು ಒಳಗೊಂಡಂತೆ ಸಿಸ್ಟಂ ಸಂಯೋಜನೆಗಳು. • ನೀವು ಡಯಾಗ್ನಾಸ್ಟಿಕ್ ಡೇಟಾವನ್ನು ಕಳುಹಿಸಲು ಒಪ್ಪಿದ್ದಲ್ಲಿ, ವಿಶ್ಲೇಷಣಾತ್ಮಕ, ತಾಂತ್ರಿಕ, ದೋಷದ, ಹಾಗೂ ಉದಾಹರಣೆಗಾಗಿ, Galaxy Wearable ನ ನಿಮ್ಮ ಬಳಕೆಯ ಸಮಯ ಮತ್ತು ಅವಧಿ, ನೀವು ಸ್ಥಾಪಿಸಿರುವ ಆಪ್‌ಗಳು ಹಾಗೂ ನೀವು ಆಪ್‌ಗಳನ್ನು ಎಷ್ಟು ಅವಧಿಗಾಗಿ ಮತ್ತು ಯಾವಾಗ ತೆರೆಯುತ್ತೀರಿ ಮತ್ತು ಮುಚ್ಚುತ್ತೀರಿ ಎನ್ನುವಂತಹ ಬಳಕೆಯ ಮಾಹಿತಿ. ನಾವು ನಿಮ್ಮ ಕುರಿತು, ನಿಮ್ಮ Galaxy Wearable ಮತ್ತು ಆಪ್‌ಗಳ ಕುರಿತು, Galaxy Wearable ಗೆ ಸಂಪರ್ಕಿಸಲಾದ ನಿಮ್ಮ ಸಾಧನಗಳು, ಹಾಗೂ ನಿಮ್ಮ Galaxy Wearable ನ ನಿಮ್ಮ ಬಳಕೆಯ ಕುರಿತಾಗಿಯೂ ಸಹ ಮಾಹಿತಿಯನ್ನು ಸಂಗ್ರಹಿಸಬಹುದು, ಹಾಗೂ ಹೀಗೆ ಸಂಗ್ರಹಿಸುವಾಗ ಅವುಗಳನ್ನು ಸಂಗ್ರಹಿಸುವ ರೀತಿಗಳ ಬಗ್ಗೆ ನಾವು ನಿಮಗೆ ವಿವರಿಸುತ್ತೇವೆ, ಹಾಗೂ ಇದರ ಅಗತ್ಯವಿದ್ದಾಗಲೆಲ್ಲಾ ನಾವು ನಿಮ್ಮ ಸಮ್ಮತಿ ಪಡೆಯತ್ತೇವೆ. ನಿಮ್ಮ ಮಾಹಿತಿಯನ್ನು ನಾವು ಹೇಗೆ ಬಳಸುತ್ತೇವೆ? • ನಿಮ್ಮ Galaxy Wearable ಗಾಗಿ ನೋಂದಾಯಿಸಲು ಮತ್ತು ಅದನ್ನು ಬಳಸಲು ನಿಮಗೆ ಸಹಾಯ ಮಾಡಲು. • ನೀವು ವಿನಂತಿಸುವ ಸೇವೆಗಳು ಮತ್ತು ವೈಶಿಷ್ಟ್ಯಗಳನ್ನು ಒದಗಿಸಲು. • ನಿಮ್ಮ ವಿನಂತಿಗಳು ಮತ್ತು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು, ಹಾಗೂ ನಿಮ್ಮ Galaxy Wearable ಗೆ ಸಂಬಂಧಿಸಿದಂತೆ ನೀವು ತಾಂತ್ರಿಕ ಸಹಾಯವನ್ನು ಕೋರಿದಾಗ ನೆರವು ನೀಡುವುದನ್ನೂ ಒಳಗೊಂಡಂತೆ, ನಿಮ್ಮ Galaxy Wearable ನ ಕುರಿತು ನಿಮ್ಮೊಂದಿಗೆ ಸಂವಹಿಸಲು. • ಆಯ್ದ Samsung ಅಥವಾ ತೃತೀಯ ಪಕ್ಷದ ಆ್ಯಪ್‌ಗಳು, ವೈಶಿಷ್ಟ್ಯಗಳು ಮತ್ತು ಸೇವೆಗಳೊಂದಿಗೆ ನೀವು ಸಂವಹನ ನಡೆಸುವಂತೆ ನಿಮಗೆ ಅನುಮತಿ ನೀಡಲು. ಉದಾಹರಣೆಗಾಗಿ, ನೀವು ನಿಮ್ಮ ಆ್ಯಪ್‌ಗಳನ್ನು ಮತ್ತು ಸಂಯೋಜನೆಗಳ ಮಾಹಿತಿಯನ್ನು Samsung Cloud ಗೆ ಬ್ಯಾಕಪ್‌ ಮಾಡಲು ಅಥವಾ ನಿಮ್ಮ Galaxy Wearable ನಲ್ಲಿ Samsung Health ಅನ್ನು ಬಳಸಲು ನಿಮಗೆ ಸಾಧ್ಯವಾಗಬಹುದು. • ನಿಮ್ಮ Galaxy Wearable ಗೆ ಸಂಬಂಧಿಸಿದಂತೆ ಗ್ರಾಹಕೀಕರಿಸಿದ ವಿಷಯವನ್ನು ಮತ್ತು ಸೇವೆಗಳನ್ನು ಒದಗಿಸಲು. • ನೀವು ನಮಗೆ ಪ್ರತ್ಯೇಕ ಸಮ್ಮತಿಯನ್ನು ನೀಡಿರುವಂತಹ ಸಂದರ್ಭದಲ್ಲಿ ಮಾತ್ರವೇ, ನೇರ ಮಾರುಕಟ್ಟೆ ಸಂವಹನಗಳ (ಉದಾಹರಣೆಗಾಗಿ ಪುಷ್‌ ಪ್ರಕಟಣೆಗಳು, ಇಮೇಲ್‌ಗಳು ಮತ್ತು ಪಠ್ಯ ಸಂದೇಶಗಳು) ಮೂಲಕ, ಮಾರಾಟ ಉತ್ತೇಜನಗಳು ಮತ್ತು ಕೊಡುಗೆಗಳನ್ನು ಒದಗಿಸಲು. • Galaxy Wearable ಮತ್ತು ನಮ್ಮ ವ್ಯವಹಾರದ ಕಾರ್ಯ ನಿರ್ವಹಿಸಲು, ಮೌಲ್ಯಮಾಪನ ಮಾಡಲು ಮತ್ತು ಸುಧಾರಿಸಲು (ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸುವುದು; ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ವರ್ಧಿಸುವುದು ಮತ್ತು ಸುಧಾರಿಸುವುದು; ನಮ್ಮ ಸಂವಹನಗಳನ್ನು ನಿರ್ವಹಿಸುವುದು; ನಮ್ಮ ಉತ್ಪನ್ನಗಳು, ಸೇವೆಗಳು ಮತ್ತು ಗ್ರಾಹಕ ಮೂಲವನ್ನು ವಿಶ್ಲೇಷಿಸುವುದು; ಮಾರುಕಟ್ಟೆ ಸಂಶೋಧನೆಯನ್ನು ನಡೆಸುವುದು; ಡೇಟಾ ವಿಶ್ಲೇಷಣೆಯನ್ನು ಕೈಗೊಳ್ಳುವುದು; ಹಾಗೂ ಲೆಕ್ಕಪತ್ರ ನಿರ್ವಹಣೆ, ಲೆಕ್ಕ ಪರಿಶೋಧನೆ ಮತ್ತು ಇತರ ಆಂತರಿಕ ಕಾರ್ಯಗಳನ್ನು ನಿರ್ವಹಿಸುವುದೂ ಕೂಡ ಸೇರಿದಂತೆ). • ನಮ್ಮ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೇಳಲು ಹಾಗೂ ಗ್ರಾಹಕರ ಸಮೀಕ್ಷೆಗಳನ್ನು ನಡೆಸಲು: ಇದರ ಅಗತ್ಯವಿದ್ದರೆ, ನಿಮ್ಮ ಪ್ರತ್ಯೇಕ ಒಪ್ಪಿಗೆಯೊಂದಿಗೆ. • ನಿಮ್ಮ Galaxy Wearable ಗಾಗಿ ಸಾಫ್ಟ್‌ವೇರ್ ನವೀಕರಣಗಳು, ನಿರ್ವಹಣೆ ಸೇವೆಗಳು ಮತ್ತು ಬೆಂಬಲವನ್ನು ಒದಗಿಸಲು. • ವಂಚನೆ ಮತ್ತು ಇತರ ಅಪರಾಧ ಚಟುವಟಿಕೆಗಳು, ಕ್ಲೇಮುಗಳು ಮತ್ತು ಇತರ ಬಾಧ್ಯತೆಗಳ ವಿರುದ್ಧ ರಕ್ಷಣೆಯನ್ನು ಒದಗಿಸಲು, ಅವುಗಳನ್ನು ಗುರತಿಸಲು ಮತ್ತು ತಡೆಗಟ್ಟಲು. • ಈ ಖಾಸಗಿತನ ಸೂಚನೆ ಮತ್ತು ಖಾಸಗಿತನ ನೀತಿಯೂ ಸೇರಿದಂತೆ, ಅನ್ವಯವಾಗುವ ಕಾನೂನು ಅಗತ್ಯತೆಗಳು, ಸಂಬಂಧಿತ ಉದ್ಯಮ ಮಾನದಂಡಗಳು ಹಾಗೂ ನಮ್ಮ ನೀತಿಗಳನ್ನು ಪಾಲಿಸಲು ಮತ್ತು ಜಾರಿಗೆ ತರಲು. ನಿಮ್ಮ Galaxy Wearable ಇತರ Samsung ಅಥವಾ ತೃತೀಯ-ಪಕ್ಷದ ಆಪ್‌ಗಳು, ಸೇವೆಗಳು ಮತ್ತು ವೈಶಿಷ್ಟ್ಯಗಳೊಂದಿಗೆ ಸಂಪರ್ಕ ಸಾಧಿಸುವ ಅಥವಾ ಬಳಸುವ ಸಾಮರ್ಥ್ಯವನ್ನು ಒದಗಿಸಬಹುದು. ಉದಾಹರಣೆಗಾಗಿ, ನೀವು ನಿಮ್ಮ Galaxy Wearable ನಲ್ಲಿ Samsung Health ಅಥವಾ Bixby Voice ಗಳನ್ನು ಬಳಸಲು ಸಾಧ್ಯವಾಗಬಹುದು. ಈ Samsung ಮತ್ತು ತೃತೀಯ-ಪಕ್ಷದ ಆಪ್‌ಗಳು, ಸೇವೆಗಳು ಮತ್ತು ವೈಶಿಷ್ಟ್ಯಗಳು ತಮ್ಮದೇ ಸ್ವಂತ ಖಾಸಗಿತನ ಸೂಚನೆಗಳನ್ನು ಹೊಂದಿರಬಹುದು. ನಿಮ್ಮ ಮಾಹಿತಿಯನ್ನು ಆ ಸೇವೆಗಳು ಹೇಗೆ ಪ್ರಕ್ರಿಯೆಗೊಳಿಸುತ್ತವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳುವುದಾಗಿ ಖಚಿತಪಡಿಸಿಕೊಳ್ಳಲು ಅವುಗಳನ್ನು ಪರಿಶೀಲಿಸಿ. ಯಾವುದೇ ಲಿಂಕ್‌ ಆಗಿರುವ ಅಥವಾ ತೋರಿಸಲಾಗಿರುವ ಆಪ್‌, ಸೇವೆ ಅಥವಾ ಇತರ ವೈಶಿಷ್ಟ್ಯದ ಮಾಲೀಕತ್ವವನ್ನು ನಾವು ಹೊಂದಿಲ್ಲದ ಅಥವಾ ನಾವು ನಿಯಂತ್ರಿಸಿಲ್ಲದ ಮಟ್ಟಿಗೆ, ಅವುಗಳ ವಿಷಯ, ಬಳಕೆ ಅಥವಾ ಖಾಸಗಿತನ ಪದ್ಧತಿಗಳಗೆ ನಾವು ಜವಾಬ್ದಾರರಲ್ಲ. ನಿಮ್ಮ ಮಾಹಿತಿಯನ್ನು ನಾವು ಯಾರೊಂದಿಗೆ ಹಂಚಿಕೊಳ್ಳುತ್ತೇವೆ? ನಾವು ನಿಮ್ಮ ಮಾಹಿತಿಯನ್ನು ಆಂತರಿಕವಾಗಿ ನಮ್ಮ ವ್ಯವಹಾರದೊಳಗೆ ಹಾಗೂ ಈ ಕೆಳಗಿನ ಘಟಕಗಳಿಗೆ ಬಹಿರಂಗ ಪಡಿಸುತ್ತೇವೆ, ಆದರೆ ಕೇವಲ ಈ ಮೇಲೆ ವಿವರಿಸಲಾದ ಉದ್ದೇಶಗಳಿಗಾಗಿ ಮಾತ್ರ. * ಸಹಸಂಸ್ಥೆಗಳು: ನಾವು ನಿಯಂತ್ರಿಸುವ ಅಥವಾ ಮಾಲೀಕತ್ವ ಹೊಂದಿರುವ Samsung Electronics ಸಮೂಹದ ಇತರ ಸಂಸ್ಥೆಗಳು; * ಸೇವಾ ಪೂರೈಕೆದಾರರು: ನಮಗೆ ಅಥವಾ ನಮ್ಮ ಪರವಾಗಿ ಸೇವೆಗಳನ್ನು ಒದಗಿಸುವ ಎಚ್ಚರಿಕೆಯಿಂದ ಆಯ್ಕೆ ಮಾಡಲಾದ ಸಂಸ್ಥೆಗಳು, ಉದಾಹರಣೆಗಾಗಿ, ನಮ್ಮ ಪರವಾಗಿ ಡೇಟಾವನ್ನು ನಿರ್ವಹಿಸುವ ಡೇಟಾ ಸರ್ವರ್‌ಗಳು. ಈ ಪೂರೈಕೆದಾರರು ಕೂಡ ನಿಮ್ಮ ಮಾಹಿತಿಯನ್ನು ರಕ್ಷಿಸಲು ಬದ್ಧರಾಗಿರುತ್ತಾರೆ; * ನಿಮ್ಮ Galaxy Wearable ಅನ್ನು ಸಂರಕ್ಷಿಸಲು ಕಾನೂನಾತ್ಮಕವಾಗಿ ಅಥವಾ ಅಗತ್ಯವಿದ್ದಂತೆ ಅವಶ್ಯವಿರುವ ಇತರ ಪಕ್ಷಗಳು: ಉದಾಹರಣೆಗಾಗಿ, ಕಾನೂನಾತ್ಮಕವಾಗಿ, ಕಾನೂನಾತ್ಮಕ ಪ್ರಕ್ರಿಯೆಯ ಕಾರಣದಿಂದ, ಅಥವಾ ಸರಕಾರೀ ಪ್ರಾಧಿಕಾರಗಳಿಂದ ಪಡೆದ ನ್ಯಾಯಾಲಯದ ಆದೇಶದ ಕಾರಣದಿಂದ ನಿಮ್ಮ ಮಾಹಿತಿಯನ್ನು ಬಹಿರಂಗಪಡಿಸಬೇಕಾಗಬಹುದು. ಕಾನೂನು ಅನುಷ್ಠಾನ, ರಾಷ್ಟ್ರೀಯ ಸುರಕ್ಷತೆ, ಭಯೋತ್ಪಾದನಾ-ನಿರೋಧಕತೆ ಅಥವಾ ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ ಇತರ ವಿಷಯಗಳ ಉದ್ದೇಶಗಳಿಗಾಗಿ ಕೂಡ ಅವರು ನಿಮ್ಮ ಮಾಹಿತಿಯನ್ನು ನಮ್ಮಿಂದ ಕೇಳಬಹುದಾಗಿದೆ; * ಸಾಂಸ್ಥಿಕ ವಹಿವಾಟುಗಳಿಗೆ ಸಂಬಂಧಿಸಿದ ಇತರ ಪಕ್ಷಗಳು: ವಿಲೀನ ಅಥವಾ ವರ್ಗಾವಣೆ, ಸ್ವಾಧೀನ ಅಥವಾ ಮಾರಾಟದ ಭಾಗವಾಗಿ, ಅಥವಾ ದಿವಾಳಿತನದ ಸಂದರ್ಭದಲ್ಲಿ ನಾವು ನಿಮ್ಮ ಮಾಹಿತಿಯನ್ನು ಮೂರನೇ ಪಕ್ಷಕ್ಕೆ ಬಹಿರಂಗಪಡಿಸಬಹುದಾಗಿದೆ; ಹಾಗೂ * ನಿಮ್ಮ ಸಮ್ಮತಿಯನ್ನು ಪಡೆದು ಅಥವಾ ನಿಮ್ಮ ನಿರ್ದೇಶನದ ಮೇರೆಗೆ ಬೇರೆ ಪಕ್ಷಗಳು: ಈ ಖಾಸಗಿತನ ಸೂಚನೆಯಲ್ಲಿ ವಿವರಿಸಲಾಗಿರುವ ಬಹಿರಂಗಪಡಿಸುವಿಕೆಗಳಿಗೆ ಹೆಚ್ಚುವರಿಯಾಗಿ, ನೀವು ಪ್ರತ್ಯೇಕವಾಗಿ ಸಮ್ಮತಿಸಿದಾಗ ಅಥವಾ ಅಂತಹ ಹಂಚಿಕೊಳ್ಳುವಿಕೆಯನ್ನು ವಿನಂತಿಸಿದಾಗ ನಾವು ನಿಮ್ಮ ಕುರಿತಾಗಿ ಮಾಹಿತಿಯನ್ನು ತೃತೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಬಹುದಾಗಿದೆ. ಈ ಖಾಸಗಿತನ ಸೂಚನೆಗೆ ನವೀಕರಣಗಳು ನಿಮ್ಮ Galaxy Wearable ಗಾಗಿ ನಿಮ್ಮ ಮಾಹಿತಿಯನ್ನು ನಾವು ಹೇಗೆ ಸಂಗ್ರಹಿಸುತ್ತೇವೆ ಮತ್ತು ಪ್ರಕ್ರಿಯೆಗೊಳಿಸುತ್ತೇವೆ ಎಂಬುದರಲ್ಲಿ ಬದಲಾವಣೆಗಳು ಅಥವಾ ಸಂಬಂಧಿತ ಕಾನೂನುಗಳು ಮತ್ತು ನಿಬಂಧನೆಗಳಲ್ಲಿನ ಬದಲಾವಣೆಗಳ ಬಗ್ಗೆ ನಿಮಗೆ ತಿಳಿಸಲು ಈ ಖಾಸಗಿತನ ಸೂಚನೆಯನ್ನು ನವೀಕರಣಗೊಳಿಸಬಹುದು. ಈ ದಸ್ತಾವೇಜನ್ನು ಕೊನೆಯದಾಗಿ ನವೀಕರಣಗೊಳಿಸಿದ ದಿನಾಂಕವನ್ನು ಈ ಖಾಸಗಿತನ ಸೂಚನೆಯ ಮೇಲ್ಭಾಗದಲ್ಲಿ ತೋರಿಸಲಾಗಿದೆ. Version:P01.03.00